ಅವಸರದ ರೇಕಣ್ಣ ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಸಂಗದಲ್ಲಿದ್ದ ಗುಪ್ತ ವಚನಕಾರ. ಅವನು ಹಿಡಿದ ಯಾವ ಕೆಲಸವನ್ನಾದರೂ ತ್ವರಿತಗತಿಯಲ್ಲಿ ಮಾಡಿ ಮುಗಿಸುತ್ತಿದ್ದುದರಿಂದ, ಅವನನ್ನು ಅವಸರದ ರೇಕಣ್ಣನೆಂದು ಕರೆಯಲಾಗಿದೆ. ಶಿವಶಕ್ತಿ-ಶಿವಭಕ್ತಿಗಳ ಸಂಗಮವನ್ನು ಈತನ ವಚನಗಳಲ್ಲಿ ಕಾಣಬಹುದು. ಶರಣರ ಅಂತರಂಗವನ್ನು ಬಣ್ಣಿಸುವಂತಹ ವಚನಗಳನ್ನು ಇವನು ರಚಿಸಿರುವನು. ಇವನ ವಚನಗಳ ಅಂಕಿತ 'ಸದ್ಯೋಜಾತಲಿಂಗ'.